Saturday, 27 September 2014

On his birth anniversary, I bow to the proud son of India, Shaheed Bhagat Singh. His undying patriotism & courage continue to inspire

"ಅಲ್ಪಕಾಲದ ಬದುಕಿನ ಅಸಾಮಾನ್ಯ ಭಗತ್ ಸಿಂಗ್"
ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಾಮ್ರಾಜ್ಯಶಾಹಿಯ ವಿರುದ್ಧ ರಾಜಿಯಿಲ್ಲದ ಹೋರಾಟ; ಕೋಮುವಾದ ಮತ್ತು ಜಾತಿ ದಮನದ ವಿರುದ್ಧ ಎಂದೂ ಕುಗ್ಗದ ಪ್ರತಿರೋಧ; ಭೂಮಾಲಿಕ-ಬಂಡವಾಳಶಾಹಿ ಆಳ್ವಿಕೆಯ ವಿರುದ್ಧ ಜಗ್ಗದ ಹೋರಾಟ; ಮತ್ತು ಸಮಾಜವಾದ ಮಾತ್ರವೇ ನಮ್ಮ ಸಮಾಜದ ಮುಂದಿರುವ ಏಕೈಕ ಪರ್ಯಾಯ ಎಂಬ ಬಗ್ಗೆ ಅಚಲವಾದ ವಿಶ್ವಾಸ.